ವಿಷಯಕ್ಕೆ ಹೋಗು

ಕೆತ್ತನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಿಸಬಹುದಾದ ಆವೃತ್ತಿಯು ಇನ್ನು ಮುಂದೆ ಬೆಂಬಲಿಸುವುದಿಲ್ಲ ಮತ್ತು ರೆಂಡರಿಂಗ್ ದೋಷಗಳನ್ನು ಹೊಂದಿರಬಹುದು. ದಯವಿಟ್ಟು ನಿಮ್ಮ ಬ್ರೌಸರ್ ಬುಕ್‌ಮಾರ್ಕ್‌ಗಳನ್ನು ನವೀಕರಿಸಿ ಮತ್ತು ಬದಲಿಗೆ ಡೀಫಾಲ್ಟ್ ಬ್ರೌಸರ್ ಮುದ್ರಣ ಕಾರ್ಯವನ್ನು ಬಳಸಿ.
ದಿಲ್ವಾರಾ ಜೈನ್ ದೇವಸ್ಥಾನಗಳ ಒಳತಾರಸಿಯ ಕೆತ್ತನೆ ಕೆಲಸ

ಕೆತ್ತನೆ ಎಂದರೆ ಮೂಲವಸ್ತುವಿನಿಂದ ಭಾಗಗಳನ್ನು ಹೆರೆದು/ಕೆತ್ತುವ ಮೂಲಕ ಆ ಮೂಲವಸ್ತುವಿನಿಂದ ಯಾವುದಕ್ಕಾದರೂ ಆಕಾರ ಕೊಡಲು ಉಪಕರಣಗಳನ್ನು ಬಳಸುವ ಕ್ರಿಯೆ. ಅದರಿಂದ ಚೂರುಗಳನ್ನು ತೆಗೆದಾಗ ಕೂಡ ಒಂದು ರೂಪವನ್ನು ಹಿಡಿದಿಡಲು ಸಾಕಷ್ಟು ಗಟ್ಟಿಯಾಗಿರುವ, ಅದೇ ಸಮಯಕ್ಕೆ ಲಭ್ಯವಾದ ಉಪಕರಣಗಳಿಂದ ಅದರ ಭಾಗಗಳನ್ನು ಕೆತ್ತುವಷ್ಟು ಮೃದುವಾದ ಯಾವುದೇ ಮೂಲವಸ್ತುವಿಗೆ ಈ ತಂತ್ರವನ್ನು ಅನ್ವಯಿಸಬಹುದು. ಶಿಲ್ಪವನ್ನು ತಯಾರಿಸುವ ಸಾಧನವಾಗಿ ಕೆತ್ತನೆಯು ಜೇಡಿಮಣ್ಣು, ಹಣ್ಣು, ಮತ್ತು ಕರಗಿಸಿದ ಗಾಜಿನಂತಹ ಮೃದು ಮತ್ತು ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಂದ ಭಿನ್ನವಾಗಿದೆ. ಮೃದುವಾಗಿದ್ದಾಗ ಇವುಗಳಿಗೆ ಅಪೇಕ್ಷಿತ ರೂಪದ ಆಕಾರ ಕೊಡಬಹುದು ಮತ್ತು ನಂತರ ಆ ರೂಪದಲ್ಲಿ ಅವುಗಳನ್ನು ಗಟ್ಟಿಯಾಗಿಸಬಹುದು. ಬಡಿದು ತಗಡಾಗಿಸಬಲ್ಲ ವಸ್ತುಗಳನ್ನು ಬಳಸುವ ವಿಧಾನಗಳಿಗಿಂತ ಕೆತ್ತನೆಗೆ ಮತ್ತಷ್ಟು ಹೆಚ್ಚು ಕೆಲಸ ಬೇಕಾಗುವ ಸಾಧ್ಯತೆಯಿರುತ್ತದೆ.[೧]

ಕೆತ್ತನೆಯ ಬಗೆಗಳಲ್ಲಿ ಮೂಳೆ ಕೆತ್ತನೆ, ಬಿಲ್ಲೆ ಕೆತ್ತನೆ, ಹಣ್ಣು ಕೆತ್ತನೆ, ಹಾಲುಗುಂಬಳ ಕೆತ್ತನೆ, ಹಿಮ ಕೆತ್ತನೆ, ದಂತ ಕೆತ್ತನೆ, ಕಲ್ಲು ಕೆತ್ತನೆ (ಕಲ್ಲುಕೊರೆತ), ತರಕಾರಿ ಕೆತ್ತನೆ, ದಾರು ಕೆತ್ತನೆ, ನಾಣ್ಯ ಕೆತ್ತನೆ, ಮರ ಕೆತ್ತನೆ ಸೇರಿವೆ.

ಉಲ್ಲೇಖಗಳು

  1. Daniel Marcus Mendelowitz, Children Are Artists: An Introduction to Children's Art for Teachers and Parents (1953), p. 136.
"https://kn.wikipedia.org/w/index.php?title=ಕೆತ್ತನೆ&oldid=866623" ಇಂದ ಪಡೆಯಲ್ಪಟ್ಟಿದೆ